ಅಂಬರಕ್ಕೆ ಅಲಂಕಾರ ನಕ್ಷತ್ರ

ರಾತ್ರಿ ಆಗಸಕ್ಕೆ ನೀನೇ ರಾಣಿ

ಅದೆಷ್ಟು ಸುಂದರ ನೀ “ರೋಹಿಣಿ”
ನೀನೊಂದು ಸೌಂದರ್ಯದ ಗಣಿ
ನಾ ಹೇಗೆ ಬಣ್ಣಿಸಲಿ ನಿನ್ನ “ಅಶ್ವಿನಿ”

ಕತ್ತಲ ಚಪ್ಪರದ ನಡು, ನಿನ್ನ ಅಬ್ಬರ
ಸಿಂಗಾರವಾಯಿತು ನಿನ್ನಿಂದ ಅಂಬರ
ನಿನ್ನ ಸಂಗಡ ಅಮರಾ ಮದುರ
ನೀನೇ ಸುಂದರಿ ಓ…ನಕ್ಷತ್ರ

ಆಹಾ ಬಾನಲಿ ಚುಕ್ಕೆಗಳ ರಾಶಿ
ಹೊಳೆಯುವ ಮೋಹಿನಿ ನೀ “ಸ್ವಾತಿ”
ಬಯಸುವೆ ನಿನ್ನ ಸ್ನೇಹವ “ಚಿತ್ರೆ”
ಕಾರ್ಮೋಡವ ಮೆರಗಿಸೋ “ವಿಶಾಖೆ”

ವಿಜ್ಞಾನಿಗಳಿಗೆ ನೀನೇ ವಿಶೇಷ
ದಿನಾ ದಿನವು ನಿನ್ನಭ್ಯಾಸ “ಆಶ್ಲೇಷ”
ಅದೆಷ್ಟು ಅಚ್ಚರಿಗಳು ನಿನ್ನಲ್ಲಿ “ಪುಷ್ಯ”
ನಿನ್ನಲ್ಲೇ ಅಡಗಿಹುದು ನಮ್ಮ ಭವಿಷ್ಯ

ರಾತ್ರಿಯ ವೇಳೆ ಮಿನುಗೋ ಚುಕ್ಕೆ
ನಿನ್ನ ಬೆಳ್ಳಿ ಎನಲೇ “ಕೃತಿಕೆ”…?
ನಿನಗೋ ಅದೆಷ್ಟೋ ಹೆಸರು “ಮೃಗಶಿರೆ”
ನಾ ಬರಲೇ ನಿನ್ನ ಬಳಿ “ತಾರೆ”…?

ವಸುಧಾ ಮುಂಡತ್ತೋಡಿ, ಉಜಿರೆ
ತೃತೀಯ ಪತ್ರಿಕೋದ್ಯಮ ವಿಭಾಗ
ಎಸ್.ಡಿ.ಎಮ್ ಕಾಲೇಜು ಉಜಿರೆ

( ಈ ಕವನವು ಜನವರಿ ತಿಂಗಳ ನೈರುತ್ಯ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ.)

Advertisements

ನಾ ಕಂಡೆ ಸಾವಿರ ಮಕ್ಕಳ ಮಹಾಮಾತೆಯ

ನನ್ನ ಕಾಲೇಜಿನ ಐದನೇ ಸೆಮಿಸ್ಟರ್ ನ ನಾಲ್ಕನೇ ವಾರ. ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ವ್ಯಸನಮುಕ್ತರಾಗಿ ಹೊಸ ಸಮಾಜ ಸೃಷ್ಟಿಸುವಲ್ಲಿ ವಿಧ್ಯಾರ್ಥಿಗಳ ಪಾತ್ರ ಹಾಗೇ ವ್ಯಸನ ಮುಕ್ತರಗಿ ಬಾಳುತ್ತೇವೆ ಎಂದು ನಾವೆಲ್ಲರೂ ಶಪತ ಮಾಡಬೇಕಿತ್ತು. ಆದರೆ ಕಾರ್ಯಕ್ರಮದ ಮೊದಲು, ಕಾಲೇನಿಂದ, ಉಜಿರೆ ಪೇಟೆಯ ವರೆಗೆ ಚಟಗಳ ವಿರೋಧಿಸಿ, ಜಾತ ನಡೆಸಲಾಗಿತ್ತು. ಕಾಲೇಜಿನ ಎಲ್ಲಾ ವಿಧ್ಯಾರ್ಥಿಗಳು ಈ ಮೆರವಣಿಗೆಯಲ್ಲಿ ಭಾಗಿಯಾಗುದ್ದರು ನಾನು ಕೂಡ. ಕಾಲ್ನಡಿಗೆಯಲ್ಲಿ ಘೋಷಣೆಗಳ ಕೂಗುತ್ತಾ ಮೆರವಣಿಗೆ ಮುಗಿಸಿ, ಇಂದ್ರಪ್ರಸ್ಥಕ್ಕೆ ಸಮೀಪಿಸುವಾಗ ನಾವು ದಣಿದಿದ್ದೆವು. ನಮ್ಮನ್ನ ಚೆನ್ನಾಗಿ ಅರಿತ ಕಾಲೇಜಿನ ಸಿಬ್ಬಂದಿಗಳು ಹಾಗು ಸಂಘದವರು ಪಪ್ಸ್ ಹಾಗು ಜ್ಯೂಸ್ನನ್ನು ಕೊಟ್ಟರು, ನಾವು ಅದನ್ನ ಹಿಡಿದು ತಿನ್ನುತ್ತಾ ಒಳಗೆ ನಡೆದೆವು. ಕೂತು ಸುದಾರಿಸಿದ ನಂತರ ಕಾರ್ಯಕ್ರಮ ಶುರುವಾಯಿತು. ಎಲ್ಲಾ ಅತಿಥಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಾಷಣ ಪ್ರಾರಂಭವಾಯಿತು. ಆದರೆ ಎಲ್ಲರು ಒಮ್ಮೆಗೆ ಮುಖ್ಯ ದ್ವಾರದ ಬಳಿ ನೋಡಿದರು, ನಾನು ನೋಡಿದೆ ಆಕಡೆಯಿಂದ ಮಾಹಾನ್ ವ್ಯಕ್ತಿ ನನ್ನ ಕಣ್ಣಿಗೆ ಕಂಡರು, ಯಾಕೋ ಗೊತ್ತಿಲ್ಲ ಮೈ ರೋಮಾಂಚನವಾಯಿತು, ನನಗೆ ತಿಳಿಯದೆ ಕಣ್ಣಲ್ಲಿ ನೀರು ಹರಿಯಿತು, ಅವರು ವೇದಿಕೆಗೆ ಬಂದು ಕುಳಿತುಕೊಳ್ಳುವ ವರೆಗೂ ನಾನು ಅವರನ್ನೇ ನೋಡುತ್ತಿದ್ದೆ. ಆಮೇಲೆಯು ಅವರತ್ತ ನನ್ನ ಗಮನ ವಾಲುತ್ತಿತ್ತು. ಅದು ಯಾರೆಂದರೆ “ಸಾಲು ಮರದ ತಿಮ್ಮಕ್ಕ”. ಅಲ್ಲಿ ವರೆಗೂ ನಮಗಾರಿಗು ಅಂತ ಮಹಾನ್ ತಾಯಿ ಬರುತ್ತಾರೆಂದು ಸುಳಿವು ಇರಲಿಲ್ಲ. ನನ್ನ ಖುಷಿಗೆ, ಪಾರವೇ ಇರಲಿಲ್ಲ ಅದು ಯಾಕೆ ಅಂತ ಈಗಲೂ ತಿಳಿಯಲಿಲ್ಲ. ಅವರ ಜೀವನ ಚರಿತ್ರೆ, ಸಾದನೆ ಎಲ್ಲವು ನನಗೆ ಗೊತ್ತಿತ್ತು. ಅವರ ಮಾತಿಗಾಗಿ ನನ್ನ ಮನ ಮಿಡಿಯುತ್ತಿತ್ತು. ಅವರಿಗೆ ನೂರಎಂಟು ಪ್ರಾಯ, ಅವರ ಮಾತು ತುಂಬಾ ಮೆದುವಾಗಿ ಕೇಳುತ್ತಿತ್ತು. ಅವರ ಮಾತ ಕೇಳಲು ಎಲ್ಲರೂ ಕಾಯುತ್ತಿದ್ದರು, ಅವರು ಆಡಿದ ಮಾತು ಅವರ ಜೀವನದ ಬಗ್ಗೆ ಆಗಿತ್ತು, ಅವರ ಮಾತು ಕೇಳಿ ನನಗೇ ತಿಳಿಯದೇ ಕಣ್ಣಲ್ಲಿ ನೀರು ಹರಿಯಿತು. ಅವರು ಮಾತನಾಡುವಾಗ ಮೌನ ಆವರಿಸಿತ್ತು. ಮದುವೆಯಾಗಿ ಅದೆಷ್ಟೋ ವರ್ಷ ಕಾದರು ದಂಪತಿಗಳಿಗೆ ಮಕ್ಕಳ ಭಾಗ್ಯವೇ ಇಲ್ಲವಾದಾಗ, ಅವರಿಬ್ಬರ ನಿರ್ಧಾರ ಎಲ್ಲರಿಗೂ ಆದರ್ಶಪ್ರಾಯವಾದ ನೈಜ ಸಂಗತಿ. ಮದುವೆಯಾಗಿ ಎರಡು ವರ್ಷವಾಗುವುದೇ ಕಷ್ಟ ಇನ್ನು ಸಿಹಿ ಸುದ್ದಿ ಇಲ್ಲವೇ? ಅವಳು ಬಜೆ ಆಗಿರಬಹುದು…. ಎಂದು ಸಮಾಜ ಠೀಕಿಸುತ್ತದೆ. ಅಂತಹುದರಲ್ಲಿ ಮಹಿಳೆಗೆ ಸ್ಥಾನವೇ ಇರದೆ ಶೋಷಣೆಗೆ ಒಳಗಾಗುತ್ತಿದ್ದ ಆ ಸಮಯ, ಆಗಲು ತಿಮ್ಮಕ್ಕನವರ ಗಂಡ ಬೇರೆ ಮದುವೆಯ ಯೋಚನೆ ಮಾಡದೆ, ಸಮಾಜದ ತುಚ್ಚ ಮಾತಿಗೆ ಕಿವಿಯೊಡ್ಡದೆ, ಅವರದೇ ಆದ ನಿರ್ದಾರ ತೆಗೆದುಕೊಂಡು ನಮಗೆಲ್ಲರಿಗು ಸ್ಪೂರ್ತಿದಾಯಕರಾಗಿ ನಿಂತಿದ್ದಾರೆ. ನಮಗೆ ಮಕ್ಕಳ ಭಾಗ್ಯ ಇಲ್ಲವಾದರು ಪರವಾಗಿಲ್ಲ, ಗಿಡ ನೆಟ್ಟು ಅವುಗಳನ್ನಾದರು ಬೆಳೆಸಿ ಅವುಗಳಲ್ಲಿ ನಮ್ಮ ಮಕ್ಕಳ ಕಾಣೋಣ ಎಂದು ಗಿಡಗಳ ನೆಟ್ಟು ಬೆಳೆಸಿದರು. ಇಂದು ಸಾವಿರ ಮಕ್ಕಳ ತಾಯಿಯಾಗಿ ತಿಮ್ಮಕ್ಕ ಹೆಮ್ಮೆ ಪಡುತ್ತಾರೆ. ನಾನು ನನ್ನ ಮಕ್ಕಳನ್ನು ನಾಡಿಗೆ ಆಸ್ತಿಯಾಗಿ ಬೆಳೆಸಿದ್ದೇನೆ, ಅದೆಷ್ಟೋ ಜನರಿಗೆ ನೆರಳು ನೀಡುವಂತೆ ಬೆಳೆಸಿದ್ದೇನೆ ಎಂದು ಖುಷಿ ಪಟ್ಟರು. ಇಂತ ಮಹಾನ್ ತಾಯಿಯ ಆಗಮನ ನನ್ನ ಮನದಲ್ಲಿ ಪುಳಕವನ್ನೇ ಮೂಡಿಸಿತು. ಇವರ ನೋಡಿ ಸಮಾಜ ಎಚ್ಚೆತ್ತುಕೊಳ್ಳ ಬೇಕು, ಮಕ್ಕಳ ಭಾಗ್ಯ ಇಲ್ಲ ಎಂದು ಕೊರಗಿ, ಸಮಾಜದ ದೂಷಣೆಗೆ ನರಳುವವರ ಕಣ್ಣೀರಿಗೆ ಪೂರ್ಣ ವಿರಾಮ ಹಾಕಬೇಕು. ಒಂದು ಹೆಣ್ಣು ತನ್ನ ಜೀವಿತಾವಧಿಯಲ್ಲಿ ಹೆಚ್ಚೆಂದರೆ ಹತ್ತರಿಂದ ಅದಿನಾರು ಮಕ್ಕಳ ಹಡೆದ ಉದಾಹರಣೆಗೆ ನಮ್ಮ ಅಜ್ಜಿ, ಮುತ್ತಜ್ಜಿಯರಿದ್ದಾರೆ, ಆದರೆ ನೂರ ಒಂದು ಮಕ್ಕಳ ಹೆತ್ತ ಪುರಾಣದ ಗಾಂಧಾರಿಯ ಮೀರಿಸುವವರು ಇನ್ನೂ ಹುಟ್ಟಿಲ್ಲ ಎಂಬ ಮಾತು ಎಲ್ಲರಿಗು ತಿಳಿದಿದೆ ಆದರೆ ಅವರ ಮೀರಿಸಿದ ತಾಯಿ ಸಾಲು ಮರದ ತಿಮ್ಮಕ, ಸಾವಿರ ಮರಗಳ, ಮಕ್ಕಳ ತಾಯಿ ಎಂಬ ಹೆಗ್ಗಳಿಕೆ ಅವರದ್ದು. ನಾವು ಅವರ ಜೀವನವನ್ನು ಓದೋಣ ನವ ಸಮಾಜ ಬೆಳೆಸೋಣ, ಮಕ್ಕಳು ಹೊಟ್ಟೆಯಲ್ಲಿಯೇ ಜನಿಸಬೇಕಾಗಿಲ್ಲ, ನಮ್ಮಲ್ಲಿ ತಾಯಿ ಹೃದಯ ಇದ್ದರೆ ಸಾಕು, ಅನಾಥ ಮಕ್ಕಳಿಗೆ, ಪ್ರಾಣಿಗಳಿಗೆ ಮರ, ಗಿಡ ಎಲ್ಲದಕ್ಕೂ ನವು ತಾಯಿ ಆಗ ಬಹುದು, ಅವು ನಮ್ಮ ಮಕ್ಕಳು ಎಂಬ ಮನೋಭಾವ ಬೆಳೆದರೆ ಸಾಕು. ಅಂದು ಮಹಾಮಾತೆಯ ಕಂಡು ನಾನು ಪುನೀತ, ನಿಜವಾಗಿಯು ಕಾಲೇಜು ಅಂದರೆ ಮೋಜು ಮಸ್ತಿ, ಗಮ್ಮತ್ತು, ಎಲ್ಲವೂ ಸರಿ ಆದರೆ ನನ್ನ ಕಾಲೇಜು ಅದೆಲ್ಲ ಮೀರಿ ನನಗೆ ಮಹಾನ್ ವ್ಯಕ್ತಿಯ ನೋಡಲು ಅವಕಾಶ ಮಾಡಿಕೊಟ್ಟಿತು. ನನಗೇ ನನ್ನ ಕಾಲೇಜಿನಲ್ಲಿ ಇದೇ ಮರೆಯಲಾಗದ ಘಟನೆ, ಇದನ್ನ ಯಾವತ್ತು ನಾನು ಮರೆಯಲಾರೆ.

ವಸುಧಾ ಮುಂಡತ್ತೋಡಿ, ಉಜಿರೆ
ತೃತೀಯ ಪತ್ರಿಕೋದ್ಯಮ ವಿಭಾಗ
ಎಸ್.ಡಿ.ಎಮ್ ಕಾಲೇಜು ಉಜಿರೆ

ಪ್ರತ್ಯಕ್ಷವಾಗಿ ಕಂಡರು ಪ್ರಮಾಣಿಸಿ ನೋಡು……..

“ವೇದ ಸಳ್ಳಾದರು ಗಾದೆ ಸುಳ್ಳಾಗದು” ಎಂಬ ಮಾತು ನಿಜಕ್ಕೂ ಸತ್ಯ. ನಮ್ಮ ಹಿರಿಯರು ಗಾದೆಗಳನ್ನು ಬುದ್ದಿ ಹೇಳಲು ಬಳಸುತ್ತಿದ್ದರು, ಅವರೇ ಅದರ ಸೃಷ್ಟಿಕರ್ತರೂ ಸಹ. ಅವುಗಳಲ್ಲಿ ಒಂದಾದ, ಪ್ರತ್ಯಕ್ಷವಾಗಿ ಕಂಡರು ಪ್ರಮಾಣಿಸಿ ನೋಡು ಎಂಬ ಗಾದೆ ಮಾತು ಎಷ್ಟೊಂದು ಅರ್ಥಮಯ. ಮನುಷ್ಯನಿಗೆ ಒಂದು ರೀತಿಯ ಅವಸರ ಎಲ್ಲವು ನನ್ನಿಂದಲೇ, ನಾನೆ ಮೊದಲು, ನಾನು ನೋಡಿದ್ದು,… ಹೇಳಿದ್ದೇ ಸರಿ ಎಂಬ ಗರ್ವ. ಹಾಗೇ ಅವಸರದಿಂದ ನಿರ್ಧಾರ ತೆಗೆದುಕೊಳ್ಳುವ ಪ್ರವೃತ್ತಿ. ಅದೆಷ್ಟೋ ಸಲ ಹಗ್ಗವನ್ನ ಕಂಡು ಹಾವು ಎಂದು ಭಯ ಪಟ್ಟು ಓಡಿ ಹೋದವರ ಕಥೆ ಕೇಳಿರ ಬಹುದು, ಅಂತಹ ಜನರಿಗೆ ಈ ಗಾದೆ ಬಹಳ ಸೂಕ್ತ. ಅದೇರೀತಿ ಮುಂಗುಸಿಯ ಕತೆಯನ್ನು ಕೇಳಿರ ಬಹುದು, ಮನೆಯ ಒಡತಿ ನೀರು ತರಲು ಹೋಗಿದ್ದಾಗ ಮುಂಗುಸಿ ಹಾವಿನಿಂದ ಮಗುವನ್ನು ಕಾಪಾಡಲು ಹಾವನ್ನು ಸಾಯಿಸಿ ಹೊರಗಡೆ ಒಡತಿಗಾಗಿ ಕಾಯುತ್ತಿರುತ್ತದೆ, ಆದರೆ ರಕ್ತವನ್ನ ಕಂಡು ಮುಂಗುಸಿಯೇ ಮಗುವನ್ನು ಸಾಯಿಸಿರ ಬಹುದು ಎಂದು ನಿರ್ಧರಿಸಿ, ಅವಸರದಿಂದ ಮುಂಗುಸಿಯನ್ನ ಸಾಯಿಸುತ್ತಾಳೆ. ಆದರೆ ಮನೆ ಒಳಗೆ ಹೋದಾಗ ಹಾವು ಸತ್ತಿರುವುದ ನೋಡಿ ನಿಜವಾದ ಸಂಗತಿ ತಿಳಿದು ಮರುಗುತ್ತಾಳೆ. ಇದು ಕೇವಕ ಕಥೆ ಅಲ್ಲ ನಿಜ, ವಾಸ್ಥವ, ಮೊದಲು ಯಾವ ವಿಷಯ ವಾಗಲಿ ಅದರ ಬಗ್ಗೆ ಸರಿಯಾಗಿ ತಿಳಿಯಬೇಕು, ಒಮ್ಮೆಯೇ ಯಾವ ವಿಷಯದ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳ ಬಾರದು. ಎಷ್ಟೊಂದು ಸಲ ಅವಸರದ ನಿರ್ಧಾರ ತಪ್ಪಾಗಿರುತ್ತೆ. ಬರೀ ಕಣ್ಣಿನಿಂದ ನೋಡಿದ ಕೂಡಲೆ ನಮ್ಮ ಊಹೆಗೆ ಬಂದ ಸತ್ಯವು ಸುಳ್ಳಾಗುವ ಅವಕಾಶ ಇರುತ್ತದೆ. ಉದಾಹರಣೆಗೆ, ಹಾಲು-ಸುಣ್ಣದ ದ್ರವ ಎರಡು ನೋಡಲು ಒಂದೇ ರೀತಿ ಕಾಣಿಸುತ್ತದೆ. ಸುಣ್ಣದ ದ್ರವವನ್ನು ನೋಡಿ ಹಾಲೆಂದು ನಂಬಿ ಕುಡಿದರೆ ಅದು ಹಾಲಲ್ಲ ಸುಣ್ಣ ಎಂದು ತಿಳಿಯುತ್ತದೆ. ಹಾಗೇ ಎಷ್ಟೋ ಸನ್ನಿವೇಶ ಗಳೂ ನಮ್ಮಲ್ಲಿ ಗೊಂದಲ ಮೂಡಿಸ ಬಹುದು, ಅಂತಹ ಸಮಯದಲ್ಲಿ ಅವಸರ ಪಡದೆ ಕಣ್ಣಾರೆ ಕಂಡಿರುವುದನ್ನು ಸಹ ಪ್ರಮಾಣಿಸಿ ನೋಡಿದರೆ ನಿಜವು ತಿಳಿಯುತ್ತದೆ. ಇದರಿಂದ ಅವಸರದಲ್ಲಿ ತೆಗೆದುಕೊಂಡು ಮುಂದಾಗುವ ಅನಾಹುತವನ್ನು ತಪ್ಪಿಸ ಬಹುದು. ವಸುಧಾ ಮುಂಡತ್ತೋಡಿ,ಉಜಿರೆ ಎಸ್.ಡಿ.ಎಮ್ ಕಾಲೇಜು ಉಜಿರೆ

ಹೊಸ ಆವಿಷ್ಕಾರಕ್ಕೆ ನಾಂದಿ…….                             

ವಾರ ಇಡೀ ಕಾಲೇಜು, ಬೆಳಗಿನಿಂದ ಸಂಜೆವರೆಗೆ ಪಾಠ.. ಅಬ್ಬಾ ಒಮ್ಮೆ ಮುಗಿದ್ರೆ ಸಾಕು, ಸಂಜೆ ಆದ್ರೆ ಸಾಕು ಅಂತ ಕಾಯ್ತಾ ಇರುತ್ತೀನಿ, ಒಂದಾದ್ರು ರಜಾ ಸಿಗಲಪ್ಪಾ , ಯಾವಾಗ ಭಾನುವಾರ ಬರುತ್ತದೆ ಎಂದು ದಿನ ಲೆಕ್ಕ ಹಾಕುತ್ತಾ ಇರುತ್ತೇನೆ. ಸಾಮಾನ್ಯವಾಗಿ ಎಲ್ಲರು ಬಾನುವಾರವನ್ನು ನಿದ್ದೆಮಾಡಿಯೇ ಕಳೆಯುತ್ತಾರೆ, ಅದೆಷ್ಟೋ ಸಲ ನಾನು ಅಂದು ಕೊಂಡಿದ್ದೇನೆ ಇಡೀ ದಿನ ನಿದ್ರೆ ಮಾಡ ಬೇಕು ಅಂತ. ಹೌದು ಬಾನುವಾರ ನನಗೆ ಕಾಲೇಜಿಗೆ ರಜಾ… ಆದರೆ ನನ್ನ ಹವ್ಯಾಸಗಳಿಗಲ್ಲ. ಬಾನುವಾರ ನನ್ನ ಹೊಸ ಆವಿಷ್ಕಾರಗಳಿಗೆ ನಾಂದಿ. ಆವಿಷ್ಕಾರ ಅಂದರೆ ವೈಜ್ಞಾನಿಕ ವಿಷಯ ಆದಾರಿತ ಅಲ್ಲ. ಬೆಳಿಗೆ ಎದ್ದು ಎಂದಿನಂತೆ ಮನೆ ಕೆಲಸದಲ್ಲಿ ಅಮ್ಮನಿಗೆ ಸಹಾಯ ಮಾಡಿ ನನ್ನ ಭಾನುವಾರದ ಕೆಲಸವನ್ನ ಪ್ರಾರಂಭಿಸುತ್ತೇನೆ. ನನಗೆ ಕಿವಿ ಓಲೆ, ಬಳೆ, ಸರ ಮಾಡುವ ಹವ್ಯಾಸವಿದೆ. ಕ್ವಿಲಿಂಗ್ ಇಯರಿಂಗ್ಸ್ ಹಾಗೆ ಉಪಯೋಗ ಮಾಡಿ ಬೇಡ ಎಂದು ಬಿಟ್ಟ ವಸ್ತುಗಳನ್ನ ಉಪಯೋಗಿಸಿ ಆಭರಣಗಳನ್ನು ತಯಾರಿಸುವುದು, ಅಲಂಕಾರಿಕ ವಸ್ತುಗಳನ್ನು ತಯಾರಿಸುವುದು ನನ್ನ ಹವ್ಯಾಸ. ಇಡೀ ದಿನ ಕಾಲಹರಣ ಮಾಡುವ ಬದಲು ನಾನು ನನ್ನನ್ನು ಇಂತಹ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ. ಅಷ್ಟೇ ಅಲ್ಲ ನನ್ನ ಇನ್ನೊಂದು ಅಭ್ಯಾಸ ಅಂದರೆ ಡ್ರೀಮ್ ಕ್ಯಾಚರ್, ಶೋಕೇಸ್ ಅಲಂಕಾರಿಕ ವಸ್ತುಗಳನ್ನು ತಯಾರಿಸುವುದು, ಹೀಗೆ ಹಲವಾರು ವಿನೂತನ ವಸ್ತುಗಳನ್ನು ತಯಾರಿಸುವುದು. ಭಾನುವಾರ ಕೇವಲ ನಿದ್ರೆ ಮಾಡಲು ಸೀಮಿತವಾಗಿಡುವುದಕ್ಕಿಂತ ಈರೀತಿಯ ಕೆಲಸದಲ್ಲಿ ಪಾಲ್ಗೊಳ್ಳುವುದು ನಮ್ಮ ವ್ಯಕ್ತಿತ್ವದ ವಿಕಸನಕ್ಕೆ ಕಾರಣವಾಗುತ್ತದೆ. ಸಮಯ ನಮಗಾಗಿ ಎಂದಿಗೂ ಕಾಯುವುದಿಲ್ಲ ಹಾಗಾಗಿ ಸಿಕ್ಕ ಸಮಯವನ್ನು ಜಡದಿಂದ ಕಳೆಯುವುದಕ್ಕಿಂತ ನಮಗೆ ಸಮದಾನ ಕೊಡುವ ಕೆಲಸ ಮಾಡುವುದು ಉತ್ತಮ. ನನಗೆ ಭಾನುವಾರ ಹೊಸ ಹುರುಪನ್ನು ಮೂಡಿಸುತ್ತದೆ, ಹೊಸ ಯೋಚನೆಗಳು ನನ್ನ ಕಾಡುತ್ತದೆ. ಅಷ್ಟೇ ಅಲ್ಲ ಅಂದು ನಾನು ತಯಾರಿಸುವ ಕಿವಿಯೋಲೆಗಳನ್ನು ಮಾರುತ್ತೇನೆ, ಹಾಗೇ ಸೀರೆಗೆ ಗೊಂಡೆ ಹಾಕುವುದು ಅಂದರೆ ಗಚ್ಚ ಹಾಕುವುದು ಇದರಿಂದಲೂ ಸಣ್ಣ ಸಂಪಾದನೆ ಆಗುತ್ತದೆ. ರವಿವಾರ ನನಗೆ ಏನೋ ಒಂದು ತೃಪ್ತಿ ನೀಡುತ್ತದೆ, ಯಾಕೆಂದರೆ ಸೋಮವಾರದಿಂದ ಶನಿವಾರದವರೆಗೆ ಕಾಲೇಜು ಕೆಲಸದಲ್ಲಿ ಬಿಝಿಯಾಗಿರುವ ನಾನು ಆದಿತ್ಯವಾರವಾದರು ಕಾಲಹರಣ ಮಾಡದೆ ನನಗಾಗಿ ಸಮಯ ಕಳೆಯುತ್ತೇನೆ. ಮನಸ್ಸು ನೆಮ್ಮದಿಯಾಗುವಂತ ಕೆಲಸ ಮಾಡುತ್ತೇನೆ. ಇದಕ್ಕೆ ನನಗಿರುವ ದಿನ ಅಂದರೆ, ಬಾನುವಾರ ಅದಕ್ಕಾಗಿ ನಾನಂತು ರಜಾವನ್ನು ಹಾಳುಮಾಡದೆ ನನಗಾಗಿ ನನ್ನ ಮನೆಯ ಅಲಂಕಾರಕ್ಕಾಗಿ ಬಳಸಿಕೊಳ್ಳುತ್ತೇನೆ. ಬರೀ ಓದುವುದು,ಕಲಿಯುವುದು ಮಾತ್ರ ಜೀವನದ ಮುಖ್ಯ ಉದ್ದೇಶ ಅಲ್ಲ, ಅದರ ಜೊತೆಗೆ ಬೇರೆ ಜ್ಞಾನವು ಬೇಕು. ನಾನಂತು ಭಾನುವಾರ ಬಂದರೆ ಏನಾದರು ಹೊಸ ವಿನ್ಯಾಸದ, ಕಸದಿಂದ ರಸ ಅಂದರೆ, ಕಸವನ್ನು ಅಲಂಕಾರಿಕ ವಸ್ತುಗಳನ್ನು ತಯಾರಿಸಲು ಬಳಸಿಕೊಳ್ಳುತ್ತೇನೆ. ಹಾಗೆ ವಿದ್ಯಾರ್ಥಿಗಳು ಅಲ್ಲದೇ ಬೇರೆ ಕೆಲಸವಾಡುವವರು ಸಹ ಭಾನುವಾರವನ್ನು ವಿಷೇಶವಾಗಿ ಕಳೆಯಿರಿ.

ವಸುಧಾ ಮುಂಡತ್ತೋಡಿ, ಉಜಿರೆ
ಎಸ್.ಡಿ.ಎಮ್ ಕಾಲೇಜು ಉಜಿರೆ

ಈ ಬರಹವು ಸಪ್ಟೆಂಬರ್ ತಿಂಗಳ ಕರ್ಮವೀರ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ.

ಗಡಿ ಕಾಯೋ ಯೋಧನಿಗೆ ನಮನ

ಗಡಿ ಕಾಯೋ ಯೋಧನಿಗೆ ನಮನ

ಭಾರತದ ಕಂದಮ್ಮ ನೀ
ನಮ್ಮೆಲ್ಲರ ರಕ್ಷಕ ನೀ
ಗಡಿಯಲ್ಲಿ ಎದೆಯೊಡ್ಡಿ
ದೇಶಕ್ಕಾಗಿ ಪ್ರಾಣ ನೀಡುವ ದಾನಿ

ಮನೆಯವರ ತೊರೆದು
ದೇಶವೇ ತವರೆಂದು
ರಾತ್ರಿ-ಹಗಲು ಜೀವ ಪಣಕ್ಕಿಟ್ಟು
ಗುಂಡೇಟಿಗೆ ಸವಾಲೊಡ್ಡೋ ಧೀರ

ಮಳೆಯೇ ಸುರಿಯಲಿ
ಬಿಸಿಲು ಧಗಧಗನೆ ಉರಿಯಲಿ
ಹಿಮವೇ ಹರಿದು ಬರಲಿ
ಗಡಿಯ ಕಾಯೋ ಕಲಿ

ನೀನು ಕಲಿಯುಗದ ಕರ್ಣ
ನಮ್ಮ ಮೇಲಿದೆ ನಿನ್ನ ಋಣ
ಇನ್ನಾದರು ಅವರನ್ನ ಗೌರವಿಸೋಣ
ನಮ್ಮ ಕಾಯೋ ಯೋಧನಿಗೆ ಜೈ ಎನ್ನೋಣ

ವಸುಧಾ ಮುಂಡತ್ತೋಡಿ,ಉಜಿರೆ
ಎಸ್.ಡಿ.ಎಮ್ ಕಾಲೇಜು,ಉಜಿರೆ

ಈ ಕವನವು 2018 ನವೆಂಬರ್ ತಿಂಗಳ ನೈರುತ್ಯ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಕೃತಿಯೇ ಆದಿ-ಅಂತ್ಯ…   

ಪ್ರಕೃತಿಯೇ ಆದಿ-ಅಂತ್ಯ…
ಧರೆಯ ಅಲಂಕರಿಸೋ ಸುಂದರಿ
ಜೀವರಾಶಿಗಳ ಸೃಷ್ಟಿಗೆ ಕಾರಣ ನೀ
ಕಣ್ಮನ ಸೆಳೆಯುವ ಮನೋಹರಿ
ಪ್ರಕೃತಿ ಎಂದೇ ಪೂಜನೀಯ ನೀ

ಹಸಿರ ಸೀರೆಯ ಉಟ್ಟು
ಕೆಮ್ಮಣ್ಣಿನ ಕುಂಕುಮ ತೊಟ್ಟು
ನೀಲ ಚಪ್ಪರದಡಿಯಲಿ
ಸಿಂಗರಿಸಿಕೊಂಡೆ ನೀ ಪೊಡವಿಯಲಿ

ನೀ ನಕ್ಕಾಗ ವರುಣನ ಆಗಮನ
ನೀ ಅತ್ತರೆ ಪ್ರಳಯಕ್ಕೆ ಆಮಂ ತ್ರಣ
ನಿನ್ನ ನಡೆದಾಟ ವಾಯುವಿನ ಆಲಿಂಗನ
ನಿನ್ನ ಮೌನ ಹೇಳತೀರದ ರೋದನ

ನೀ ವೈವಿಧ್ಯತೆಯ ಸೃಷ್ಟಿ ಕರ್ತೆ
ಭೂಮಂಡಲವ ಸಲಹೋ ಮಾತೆ
ಸಿಟ್ಟಲಿ ನೀನೇ ಕಾಲ ಯಮ
ನಿನ್ನೆದುರು ಜೀವಸಂಕುಲ ನಿರ್ಣಾಮ

ನೀನು ನಕ್ಕರೆ ಹೂವು ಅರಳುವುದು
ನೀ ಅತ್ತರೆ ಪೊಡವಿ ಮರುಗುವುದು
ನೀನೇ ಇಲ್ಲವಾದರೆ…….
ಜೀವಂತವಾಗಿರುವಳೆ ವಸುಂಧರೆ.

ವಸುಧಾ ಮುಂಡತ್ತೋಡಿ, ಉಜಿರೆ
ಎಸ್.ಡಿ.ಎಮ್ ಕಾಲೇಜು, ಉಜಿರೆ

ಈ ಕವನವು 2018 ನವೆಂಬರ್ ತಿಂಗಳ ಉತ್ಥಾನ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ.

ಗೆಳತಿಯೇ ಈ ಸ್ನೇಹದ ಪಯಣದಲಿ…..

ಗೆಳತಿಯೇ ಈ ಸ್ನೇಹದ ಪಯಣದಲಿ…..

ಗೆಳತಿ ನೀನು ನನಗೆ ಹಿತ
ನನ್ನ ಪ್ರೀತಿಯ “ನಮಿತಾ”
ಹೀಗೆ ಸಾಗಲಿ ನಮ್ಮ ಸ್ನೇಹದ ಜಾತ
ನಲಿಯುತಾ…ಕುಣಿಯುತಾ

ಗೆಳತಿ.. ನಾವಿಟ್ಟ ಹೆಜ್ಜೆ ಒಂದೆ
ನಮ್ಮ ಯೋಚನೆಯು ಒಂದೆ
ಹೀಗಿರಲು ಸಣ್ಣಪುಟ್ಟ ಕೋಪ
ನಮ್ಮಗೆಳೆತನದೆದುರು ಗೆಲ್ಲುವುದೇ

ತರಗತಿಯ ನಡುವೆ ನಮ್ಮ ತುಂಟಾಟ
ನಮ್ಮ ತಮಾಷೆಗೆ ನಮ್ಮದೇ ನಗೆಯಾಟ
ನಿದ್ರೆ ಬಂದಾಗ ಇಬ್ಬರಿಗು ಪರದಾಟ
ಇದರ ನಡುವೆ ಆಟ-ಪಾಟ..ಕಾಟ

ಗೆಳೆತಿ ನಿನ್ನೊಂದಿಗಿನ ನಾನು,
ದೋಣಿ ನೀನು ನದಿ
ಹೀಗಿರುವ ನಮ್ಮ ಪಯಣದಲಿ
ಧಣಿವಿನ ಮಾತೆಲ್ಲಿ?

ನಮ್ಮ ಸ್ನೇಹದ ಪಯಣದಲಿ
ಕಷ್ಟಗಳು, ನೋವು ಸಾವಿರ ಬರಲಿ
ನಿನ್ನ ಗೆಳೆತನದ ಬಲದಲಿ
ನಾ ಸಾಗುವೆ ಸಹಸ್ರ ಮೈಲಿ

ಎರಡು ಜಡೆ ಸೇರಿದರೆ ಯುದ್ಧ!
ನಮ್ಮಿಬ್ಬರ ಸ್ನೇಹದ ಎದುರಲಿ
ಯುದ್ದ ಇರಲಿ ,ಜಗಳದ ಮಾತೆಲ್ಲಿ?
ನಿನಗಾಗಿ ನಾನು ಎಲ್ಲದಕ್ಕು ಸಿದ್ದ….

ವಸುಧಾ,ಮುಂಡತ್ತೋಡಿ ಉಜಿರೆ
ಎಸ್.ಡಿ.ಎಮ್ ಕಾಲೇಜು, ಉಜಿರೆ.